ಕೇಂದ್ರದಿಂದ ಆದೇಶ ಬರುವವರೆಗೂ ಶಾಲಾ ಕಾಲೇಜು ಪ್ರಾರಂಭವಾಗುವುದಿಲ್ಲ

 


ಬೆಂಗಳೂರು: ಅಕ್ಟೋಬರ್‌ನಲ್ಲಿ ಶಾಲಾ-ಕಾಲೇಜುಗಳನ್ನು ತೆರೆಯಲು ಚಿಂತಿಸಲಾಗ್ತಿದೆ ಅಂತ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್​ ನಾರಾಯಣ್ ಇಂದು ಹೇಳಿಕೆ ನೀಡಿದ್ದು, ಈ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್​ ಕುಮಾರ್​ ಸ್ಪಷ್ಟನೆ ನೀಡಿದ್ದಾರೆ.

ದೂರವಾಣಿಯಲ್ಲಿ ಕನ್ನಡ ವಾರ್ತೆಗೆ ಪ್ರತಿಕ್ರಿಯಿಸಿದ ಸುರೇಶ್‌ಕುಮಾರ್, ಕೇಂದ್ರ ಸರ್ಕಾರ ಈವರೆಗೂ ಶಾಲಾ- ಕಾಲೇಜುಗಳನ್ನು ತೆರೆಯಲು ನಮಗೆ ಮಾರ್ಗಸೂಚಿಯನ್ನು ಹೊರಡಿಸಿಲ್ಲ. ಎಲ್ಲಿಯವರೆಗೂ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಹೊರಬರುವುದಿಲ್ಲವೋ,‌ ಅಲ್ಲಿಯವರೆಗೂ ನಾವು ಶಾಲಾ-ಕಾಲೇಜುಗಳನ್ನು ತೆರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ರು.

ಒಮ್ಮೆ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಹೊರಬಿದ್ದ ಬಳಿಕವೇ ಅದರ ಬಗ್ಗೆ ಚಿಂತನೆ ಮಾಡಲಾಗುತ್ತದೆ. ಈಗ ಸೆಪ್ಟೆಂಬರ್‌, ಅಕ್ಟೋಬರ್ ಅಂತಾ ನಾವು ಇಲಾಖೆಯಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ.

ಉನ್ನತ ಶಿಕ್ಷಣ ಸಚಿವರು ಅವರ ಇಲಾಖೆಯ ಬಗ್ಗೆ ಮಾತನಾಡಿದ್ದಾರೆ. ಅವರು ಶಾಲಾ-ಕಾಲೇಜುಗಳನ್ನು ಒಟ್ಟಿಗೆ ಸೇರಿಸಿಲ್ಲ ಅಂತ ತಿಳಿಸಿದ್ರು.

Comments